ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ
KARNATAKA NURSING & PARAMEDICAL SCIENCES EDUCATION (REGULATION) AUTHORITY
ಅರೆ ವೈದ್ಯಕೀಯ ಮಂಡಳಿ
PARA MEDICAL BOARD
 
ಮುಖ ಪುಟ
Home
ಮಂಡಳಿಯ ಬಗ್ಗೆ
About PMB

ನಿಯಮಗಳು
Rules

ಕೋರ್ಸ್‍ಗಳು
Courses

ಡೌನ್‍ಲೋಡ್
Downloads

ಸದಸ್ಯರು
Members

ಸಂಪರ್ಕಿಸಿ
Contact us

ಶುಲ್ಕದ ವಿವರ
Fee Structure

ಮಾನ್ಯತೆ ಪಡೆದ ಕಾಲೇಜುಗಳು
Recognized Collegesಮಂಡಳಿಯ ಬಗ್ಗೆ

  ವೈದ್ಯಕೀಯ ಶಿಕ್ಷಣ ವಿಷಯಗಳಲ್ಲಿನ ಅರೆ ವೈದ್ಯಕೀಯ ಕೋರ್ಸ್‌ಗಳು ಬಹಳ ಮಹತ್ವದ್ದಾಗಿವೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ವೃತ್ತಿಯ ಅವಿಭಾಜ್ಯ ಅಂಗವಾಗಿರುವ ಅರ್ಹ ಮತ್ತು ಸುಶಿಕ್ಷಿತ ಅರೆ ವೈದ್ಯಕೀಯ ಸಿಬ್ಬಂದಿಗಳ ಅವಶ್ಯಕತೆ ಹೆಚ್ಚುತ್ತಿದೆ. ಅರ್ಹ ಮತ್ತು ತರಬೇತಿ ಪಡೆದ ಅರೆ ಮೆಡಿಕಲ್ ಸಿಬ್ಬಂದಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವುದು ಅವಶ್ಯಕ.

 1997ರ ಪೂರ್ವದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್‍ಗಳನ್ನು ವೃತ್ತಿಪರ ಶಿಕ್ಷಣ ಇಲಾಖೆಯ ಮೂಲಕ ನಡೆಸುತ್ತಿದ್ದು, ಈ ಕೋರ್ಸ್‍ಗಳು ವೈದ್ಯಕೀಯ ವೃತ್ತಿಗೆ ಸಂಬಂಧಪಟ್ಟಿರುವ ವಿಷಯಗಳೆಂದು ಪರಿಗಣಿಸಿದ ಸರ್ಕಾರವು ಈ ಕೋರ್ಸ್‍ಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ತಂದು ದಿನಾಂಕ 2.5.1997ರ ಸರ್ಕಾರದ ಆದೇಶದಲ್ಲಿ ಪ್ಯಾರಾ ಮೆಡಿಕಲ್ ಬೋರ್ಡನ್ನು ಸ್ಥಾಪಿಸಿರುತ್ತದೆ.

 ಕರ್ನಾಟಕ ಸರ್ಕಾರವು ರಚಿಸಿದ ಅರೆ ವೈದ್ಯಕೀಯ ಮಂಡಳಿಯು ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಅರೆ ವೈದ್ಯಕೀಯ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ. ಗುಣಮಟ್ಟದ ಶಿಕ್ಷಣವನ್ನು ನೀಡಲು ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವುದು, ಸಂಯೋಜನೆ ನೀಡುವುದು, ಪ್ರವೇಶಾತಿ ನಿಯಂತ್ರಿಸುವುದು ಮಂಡಳಿಯ ಮುಖ್ಯ ಕಾರ್ಯಗಳು.

ಉದ್ದೇಶಗಳು

 ಕೋರ್ಸುಗಳನ್ನು ನಡೆಸುವ ಮೂಲ ಧ್ಯೇಯ - ವೈಜ್ಞಾನಿಕ ತತ್ವಗಳನ್ನೊಳಗೊಂಡ ಹಾಗೂ ಗುಣಮಟ್ಟದಿಂದ ಕೂಡಿದ ಬೋಧನೆ ಹಾಗೂ ತರಬೇತಿ ನೀಡುವುದಾಗಿರುತ್ತದೆ. ತರಬೇತಿ ಹೊಂದಿದ ಅಭ್ಯರ್ಥಿಯು ಸಂಬಂಧಪಟ್ಟ ವಿಷಯದಲ್ಲಿ ಸಾಕಷ್ಟು ಜ್ಞಾನಾರ್ಜನೆಯನ್ನು ಪಡೆಯುವುದಲ್ಲದೆ, ಸ್ವತಂತ್ರವಾಗಿ ತನ್ನ ವೃತ್ತಿ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತತೆಯನ್ನು ಹೊಂದುವಂತಾಗುವುದು. ವೃತ್ತಿಪರ ತರಬೇತಿ ಪಡೆದ ಅಭ್ಯರ್ಥಿಗಳಿಗೆ ದೇಶದಲ್ಲೆಡೆ ಹೆಚ್ಚು ಬೇಡಿಕೆ ಇರುವುದರಿಂದ, ಈ ಕೋರ್ಸುಗಳು ವೈದ್ಯಕೀಯ ವೃತ್ತಿಯ ಒಂದು ಮುಖ್ಯ ಭಾಗವೇ ಆಗಿದ್ದು, ಆರೋಗ್ಯ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಮುಖ್ಯ ಪಾತ್ರ ವಹಿಸುವಂತಹದ್ದಾಗಿರುತ್ತವೆ.

 1. ಸ್ವತಂತ್ರವಾಗಿ ವಿವಿಧ ಪ್ರಯೋಗಾಲಯ ನಿರ್ವಹಣೆ, ತನಿಖಾ ವಿಧಾನಗಳು, ಪರೀಕ್ಷೆಗಳನ್ನು ದೋಷವಿಲ್ಲದೆ ನಿಖರತೆಯೊಂದಿಗೆ ಜವಾಬ್ದಾರಿಯುತ ವೃತ್ತಿಪರರಾಗಿ ಕಾರ್ಯ ನಿರ್ವಹಿಸುವ ಮೂಲಕ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ವೈದ್ಯರಿಗೆ ಸಹಾಯ ಮಾಡುವುದು.

 2. ಪ್ರಯೋಗಾಲಯಗಳು ಅಥವಾ ಘಟಕಗಳಲ್ಲಿ ವಿಶ್ವಾಸದೊಂದಿಗೆ ವೈದ್ಯಕೀಯ ಉಪಕರಣಗಳು ನಿರ್ವಹಿಸಲು ಮತ್ತು ನೋಡಿಕೊಳ್ಳಲು ಸಾಕಷ್ಟು ಜ್ಞಾನವನ್ನು ನೀಡುವುದು

3. ಸ್ವಯಂ ಉದ್ಯೋಗಾವಕಾಶಗಳನ್ನು ಪಡೆಯಲು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು

 4. ವಿವಿಧ ಪರೀಕ್ಷೆಗಳನ್ನು ಮಾಡಲು ಮತ್ತು ಫಲಿತಾಂಶಗಳನ್ನು ವ್ಯಾಖ್ಯಾನಿಸಲು ಪರಿಣತಿಯನ್ನು ಅಭಿವೃದ್ಧಿಪಡಿಸುವುದು.

 5. ಆರೋಗ್ಯ ಸೇವೆಗಳು ಮತ್ತು ರೋಗಿಗಳ ಆರೈಕೆ ವ್ಯವಸ್ಥೆಗೆ ಸಾಕಷ್ಟು ಕೊಡುಗೆ , ಅರ್ಹ ಮಾನವಶಕ್ತಿ ಮತ್ತು ಸುಶಿಕ್ಷಿತ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಪೂರೈಸುವುದು.

 6. ತರಬೇತಿಯ ನಂತರ ಅಭ್ಯರ್ಥಿಗಳು ವೈದ್ಯಕೀಯ / ದಂತ ಕಾಲೇಜು, ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕ್ಲಿನಿಕಲ್ ಲ್ಯಾಬೊರೇಟರೀಸ್, ನರ್ಸಿಂಗ್ ಹೋಮ್ಸ್ ಮತ್ತು ರಾಷ್ಟ್ರೀಯ ಆರೋಗ್ಯದ ಇತರ ಯೋಜನೆಗಳಲ್ಲಿ ತಂತ್ರಜ್ಞರು ಅಥವಾ ಸಹಾಯಕರಾಗಿ ನೇಮಕಗೊಳ್ಳಲು ಅರ್ಹರಾಗುತ್ತಾರೆ. ಅರೆ ವೈದ್ಯಕೀಯ ಕೋರ್ಸ್‌ಗಳು ಉತ್ತಮ ಆರೋಗ್ಯ ವ್ಯವಸ್ಥೆಯ ಉನ್ನತಿಗಾಗಿ ಸಾಕಷ್ಟು ಸಂಖ್ಯೆಯ ಅರ್ಹ ಮತ್ತು ತರಬೇತಿ ಪಡೆದ ಸಿಬ್ಬಂದಿಗಳನ್ನು ಒದಗಿಸುತ್ತವೆ.

ಕಾರ್ಯವಿಧಾನ

 ಖಾಸಗಿ ಕಾಲೇಜುಗಳನ್ನು ಪ್ರಾರಂಭಿಸಲು ಆನ್‍ಲೈನ್ ಮೂಲಕ ಅರ್ಜಿ ಕರೆದು, ಅರ್ಜಿ ಸಲ್ಲಿಸಿದ ವಿದ್ಯಾ ಸಂಸ್ಥೆಗಳಿಗೆ ವೈದ್ಯಕೀಯ ಕಾಲೇಜುಗಳ ವಿಭಾಗ ತಜ್ಞರಿಂದ ತಪಾಸಣೆ ನಡೆಸಿ ತಪಾಸಣಾ ವರದಿಯೊಂದಿಗೆ ಪ್ರಾಸ್ತವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಸರ್ಕಾರದಿಂದ ಅನುಮೊದನೆಯಾಗುವ ಕಾಲೇಜುಗಳಿಗೆ ಮಂಡಳಿಯೊಂದಿಗೆ ಸಂಯೋಜನೆಯನ್ನು ನೀಡಲಾಗುವುದು.

 ಅಸ್ತಿತ್ವದಲ್ಲಿರುವ ಪ್ಯಾರಾ ಮೆಡಿಕಲ್ ಸಂಸ್ಥೆಗಳ ಪರಿಶೀಲನೆಯನ್ನು ನಿಯತಕಾಲಿಕವಾಗಿ ನಡೆಸಿ ಸಂಯೋಜನ ನವೀಕರಣವನ್ನು ನೀಡುವುದು.

  ಪ್ರವೇಶ, ವಯಸ್ಸು, ಕೋರ್ಸ್‌ನ ಅವಧಿ, ಪ್ರಾಯೋಗಿಕ ತರಗತಿ ನಡೆಸಲು ಅಗತ್ಯ ಸೌಲಭ್ಯಗಳು ಹಾಗೂ ಬೋಧನಾ ಸಿಬ್ಬಂದಿಗಳ ನಿಯಮ, ಕಾಯಿದೆ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವುದು

  ಕೋರ್ಸ್‌ಗಳಿಗೆ ಪಠ್ಯಕ್ರಮವನ್ನು ರೂಪಿಸುವುದು ಮತ್ತು ಪರೀಕ್ಷೆಯ ಯೋಜನೆಯನ್ನು ನಿರ್ದಿಷ್ಟಸುವುದು

  ಮಂಡಳಿಯು "ಪರೀಕ್ಷಾ ಪ್ರಾಧಿಕಾರದ ಮಂಡಳಿ" ಯಾಗಿ ಕಾರ್ಯನಿರ್ವಹಿಸುತ್ತದೆ. ಪರೀಕ್ಷೆಗಳನ್ನು ನಡೆಸುವುದು ಮತ್ತು ಉತ್ತೀರ್ಣ ಅಭ್ಯರ್ಥಿಗಳಿಗೆ ಡಿಪ್ಲೊಮಾ ಪ್ರಮಾಣಪತ್ರಗಳನ್ನು ನೀಡುವುದು.

  ಅಗತ್ಯ ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರವನ್ನು ನೀಡಲು ಸಂಸ್ಥೆಗಳ ತಪಾಸಣೆ ನಡೆಸಿದ ನಂತರ ಮಂಜುರುಮಾಡುವುದು
ABOUT PARA MEDICAL BOARD

     Para Medical Courses in interdisciplinary medical subjects are becoming enormously important in Health Care Systems. In the recent years, there has been a growing need for qualified and well-trained Para Medical personnel who form an integral component of medical profession. In order to meet the increasing demand for qualified and trained Para Medical personnel it is necessary to impart the training to the eligible and interested students.

      The Man Power Committee constituted by the Govt. of Karnataka has emphasized that there is an acute shortage of Para Medical personnel in our State. Taking this into consideration the State Govt. has constituted this Board in the year 1997 to control and to conduct the Para Medical Courses.

      The Para Medical Board formed by the Government of Karnataka is having overall control over the Govt. and Pvt. Institutions running Para Medical Courses in the State. The main functions of the Board are grant of affiliation, regulate admissions and control the functioning of Institutions running Para Medical courses with respect to importing quality education programme and conduction of examinations.

OBJECTIVES

      The objectives of the Para Medical Courses is to ensure the scientific training during the course of study, thus the trainee acquires adequate knowledge and skill in his/her field and he/she shall be able to carry out:

      a. Various laboratory tests independently without an error, perform, investigative or curative procedures with accuracy and precision as a responsible professional and thereby assist the clinicians in diagnosis and treatment.

      b. Manage laboratories or units confidently with adequate knowledge to handle, operate and take care of various equipments, instruments and materials used.

      c. Develop initiative and competence in order to avail self employment opportunities.

      d. Develop expertise to perform various tests and to interpret the results.

      e. Fulfill the need of qualified manpower and well-trained para medical personnel who will contribute a lot to Health Care services and Patient care system.

      f. The successful candidates after the period of training will become eligible for appointment as Technicians or Assistants in various departments of Medical / Dental College, Hospitals, Primary Health Centers, Clinical Laboratories at district and taluk level, Nursing Homes and also in other schemes of National Health Programmes. The Para Medical Courses provide great employment opportunities and also ensures the availability of sufficient number of qualified and trained Para Medical Personnel for the upliftment of a good Health Care System.

FUNCTIONS

      To process the application of institutions both Government and Private who have applied for permission to start various Para Medical Courses (both existing and new) and to arrange for the inspection of such institution with respect to infrastructure and other facilities required for smooth conduct of such courses and to submit the report to the Government for sanction of the courses by duly fixing intake.

     a. To conduct periodical inspections of the Institutions which are already running such Para Medical courses for grant of affiliation and renewal of affiliation.

      b. To frame the rules, regulations and guidelines for such courses in terms of eligibility for admissions, age, duration of the course, infrastructure facilities for conducting theory and practical classes with required teaching personnel

      c. To frame the syllabus for the courses and to specify the scheme of examination in detail.

    d. The Board will act as "Board of Examination Authority" and shall conduct the examinations and issue Diploma Certificates to the successful candidates.

      e. To grant examination centre to the desirous institutions after conducting inspection, where ever necessary.

2008, Para Medical Board, All rights reserved